14-11-2018: ಬುಧವಾರದ ದಿನ ಭವಿಷ್ಯ | Boldsky

2018-11-14 49

ಕನಸು ನೂರಾರು ಇರಬಹುದು, ಆದರೆ ಮನಸ್ಸು ಒಂದೇ ಆಗಿರಬೇಕು. ಯೋಚನೆ ಸಾವಿರಾರು ಆಗಿರಬಹುದು, ಆದರೆ ಗುರಿ ಒಂದೇ ಆಗಿರಬೇಕು. ಈ ಮಾತು ಎಷ್ಟು ನಿಜಾ ಅಲ್ಲವಾ? ನಾವು ಅದೆಷ್ಟೇ ಕನಸು ಕಂಡಿದ್ದರೂ ಆ ಕನಸಿನ ಬಗ್ಗೆ ನಮ್ಮ ಮನಸ್ಸು ಏನು ಹೇಳುತ್ತದೆ ಎನ್ನುವುದರ ಆಧಾರದ ಮೇಲೆಯೇ ನಿರ್ಧಾರ ಕೈಗೊಳ್ಳುತ್ತೇವೆ. ಹಾಗೆಯೇ ಹಲವು ಬಗೆಯನ್ನು ನೋಡಿದಾಗ ಅಥವಾ ಕೇಳಿದಾಗ ಕಲ್ಪನೆಯ ಲೋಕದಲ್ಲಿ ಸಾವಿರಾರು ಆಲೋಚನೆಗಳನ್ನು ಕೈಗೊಳ್ಳುತ್ತೇವೆ. ಆ ಆಲೋಚನೆಗಳಂತೆ ನಾವು ನಡೆದರೆ ನಿರ್ದಿಷ್ಟ ಗುರಿಯನ್ನು ತಲುಪಲು ಸಾಧ್ಯವಿಲ್ಲ. ಹಾಗಾಗಿ ಅದೆಷ್ಟೇ ಆಲೋಚನೆಗಳು ನಮ್ಮ ಮನಸ್ಸನ್ನು ತಟ್ಟಬಹುದು. ಆದರೆ ನಾವು ಸೂಕ್ತ ರೀತಿಯ ಒಂದು ಗುರಿಯನ್ನು ಹೊಂದಿರಬೇಕು. ಆ ಗುರಿ ಸಾಧನೆಗಾಗಿ ಶ್ರಮಿಸಬೇಕು ಆಗಲೇ ಯಶಸ್ಸಿನ ತುದಿಯನ್ನು ನಾವು ತಲುಪುತ್ತೇವೆ. ಬುಧವಾರವಾದ ಇಂದು ಸಾಮಾನ್ಯವಾಗಿ ಬಹುತೇಕ ಜನರು ಉದ್ಯೋಗ ಹಾಗೂ ವ್ಯಾಪಾರ ವಹಿವಾಟುಗಳಲ್ಲಿ ತಲ್ಲೀನರಾಗಿರುತ್ತಾರೆ. ಈ ವಾರದ ಅಂತ್ಯದೊಳಗೆ ಸಾಧನೆಯ ಗುರಿ ತಲುಪಬಹುದೇ? ಎನ್ನುವ ವಿಚಾರದಲ್ಲಿ ಇರುತ್ತಾರೆ. ಇಂತಹ ನಿಮ್ಮ ಬಯಕೆಗೆ ರಾಶಿಚಕ್ರ ಎಷ್ಟು ಸಹಕಾರ ನೀಡುತ್ತವೆ? ಇಂದು ನಿಮ್ಮ ಭವಿಷ್ಯದಲ್ಲಿ ಏನಾಗಬಹುದು? ಇವೆಲ್ಲಾ ಮಾಹಿತಿ ತಿಳಿದುಕೊಳ್ಳಲು ಇಂದಿನ ದಿನಭವಿಷ್ಯ ವಿಡಿಯೋ ನೋಡಿ